ತೋಪ್ರ -
	ಪಂಜಾಬಿನ ಅಂಬಾಲಾ ಜಿಲ್ಲೆಯಲ್ಲಿರುವ ಒಂದು ಸ್ಥಳ.  ಆದರೆ ಇಲ್ಲಿ ಅಶೋಕನ ಸ್ತಂಭ ಶಾಸನ ದೊರಕಿದ್ದರಿಂದ ಇದಕ್ಕೆ ಪ್ರಾಮುಖ್ಯ ಬಂದಿದೆ.  ಈಗ ಆ ಶಾಸನ ಈ ಸ್ಥಳದಲ್ಲಿಲ್ಲ.  ಅದನ್ನು ದೆಹಲಿಗೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಅದನ್ನು ದೆಹಲಿ ತೋಪ್ರಾ ಶಾಸನವೆಂದು ಹೇಳುತ್ತಾರೆ.  ಆ ಶಾಸನದ ಪೂರ್ಣಪಾಠವನ್ನು 1837 ರಲ್ಲಿ ಜೇಮ್ಸ್ ಪ್ರಿನ್ಸೆಪ್ ಪ್ರಕಟಿಸಿದ.  ಅದರಿಂದ ಅದು ಅಶೋಕನ ಏಳನೆಯ ಸ್ತಂಭ ಶಾಸನವೆಂದು ತಿಳಿದುಬಂತು. ಅದರ ಕಾಲ ಕ್ರಿ. ಪೂ. 243 - 42.  ಅಶೋಕ ತನ್ನ ಶಿಲಾಶಾಸನಗಳಲ್ಲಿ ಹೇಳಿರುವ ಅದರ ವಿಷಯಗಳನ್ನೇ ಅದರಲ್ಲಿ ಒತ್ತಿ ಹೇಳಿದ್ದಾನೆ.  ಒಂದು ರೀತಿಯಲ್ಲಿ ಆ ಶಾಸನ ಶಿಲಾಶಾಸನಗಳ ಪರಿಶಿಷ್ಟದಂತೆ ತೋರುತ್ತದೆ.					(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ